
ಬೆಂಗಳೂರಿನಲ್ಲಿ ದಿನೆ ದಿನೆ ಗಗನಕ್ಕೆ ಏರುತ್ತಿರುವ ಆಹಾರ ಧಾನ್ಯಗಳ ಬೆಲೆಯಿಂದ ಬೆಸತ್ತ ನಾವು ಈ ಬಾರಿ ಉರಿಗೆ ಹೋದರೆ ಅಲ್ಲಿಂದಲೆ ಕೆಲವು ವಸ್ತುಗಳನ್ನು ತರುವದಾಗಿ ನಿರ್ಧರಿಸಿದ್ದೆವು. ಅದರಂತೆ ನನ್ನ ಅಣ್ಣ ಉರಿಗೆ ಹೊದಾಗ ಉಳ್ಳಾಗಡ್ಡಿ, ಚವಳಿಕಾಯಿ, ಟೊಮೆಟೊ ತಂದಿದ್ದ. ಬೆಂಗಳೂರಿನಲ್ಲಿ ನಾನು ನನ್ನ ಅಣ್ಣನೊಂದಿಗೆ ಇರುತ್ತಿದ್ದೆ. ಇಬ್ಬರು ಕೆಲಸ ಮಾಡುತ್ತಿದ್ದೆವು. ಹಾಗಾಗಿ ನಾವು ಇಬ್ಬರು ಮನೆಯಲ್ಲಿ ಕುಳಿತು ಊಟ ಮಾಡುವದು ರಾತ್ರಿ ಒಂದು ವೇಳೆ ಮಾತ್ರ. ನಮ್ಮ ಮನೆಯಲ್ಲಿ ಇಗಲು ನಾವು ಉಳ್ಳಾಗಡ್ಡಿ ,ಬದನೆಕಾಯಿ , ಟೊಮೆಟೊ, ಬಟಾಟೆಯನ್ನು ಬಿಟ್ಟು ಬೇರೆಯಾವ ತರಕಾರಿಯನ್ನು ತರುವದಿಲ್ಲಾ. ಕಾರಣ ಅದನ್ನು ಸೊಸ ಬೇಕು, ತೊಳೆಯ ಬೇಕು, ಬೆಯಿಸ ಬೇಕು, ಕಾಲ ಹರಣ ಎಂದು ತರುತ್ತಿರಲ್ಲಿಲ್ಲ. ಆದರೆ ಈ ಬಾರಿ ಉರಿಗೆ ಹೋದಾಗ ನಮ್ಮ ಅಣ್ಣ ಮಾತ್ರ ಚವಳಿಕಾಯಿ ತಂದಿದ್ದ. ಮೊದಲನೆ ಬಾರಿ ನಮ್ಮ ಮನೆಯ ಬುಟ್ಟಿಯಲ್ಲಿ ಬೇರೆ ವಸ್ತು ಬಂದಿದ್ದು. ನಾನು ಎನು ಇದನನ್ನು ಯಾಕೆ ತಂದೆ ನಾವು ಇದನ್ನು ಎನು ಮಾಡಬೇಕು ಎಂದೆ. ಆಗ ಅವನು ದಿನೆ ದಿನೆ ಮಾಡಿ ತಿರಸಿದರೆ ಆತು ಎಂದು ಸುಮ್ಮನಾದ. ನಮ್ಮ ಅಡುಗೆಮನೆ ಸಹ ಬೇರೆ ತರಕಾರಿಯ ಬರುವಿಕೆಗೆ ಅಶ್ಟಾಗಿ ಸಹಕರಿಸಿರಲಿಲ್ಲ. ಅವನು ಬಂದಾಗಿನಿಂದ 2 ದಿನಗಳನ್ನು ಸಾರಿನಲ್ಲಿ ಹಾಕಿ ಅರ್ಧ ಮುಗಿಸಿದದ್ದ. ಆದರೆ ಒಂದು ದಿನ ಅವುಗಳು ಹಾಳಗುವ ಸ್ಥಿತಿಗೆ ಬಂದಾಗ ಅವುಗಳನ್ನು ಚೆಲ್ಲದೆ ಅದರ ಸಹಾಯದಿಂದ ಭಾತ ಮಾಡಿದೆವು. ಭಾತ ಏನೊ ಅದರ ರುಪ ಪಡೆಯಿತು. ಆದರೆ ನಾನು ಮತ್ತು ನನ್ನ ಅಣ್ಣ ಈ ಚವಳಿಕಾಯಿ ಭಾತ ಎಂದು ತಿಂದರಲಿಲ್ಲ. ಮನೆಯಲ್ಲಿ ಇದ್ದಾಗ ಚವಳೆಕಾಯಿ ಎಂದರೆ ತಿನ್ನುತ್ತಿರಲ್ಲ. ಆದರೆ ಈ ಭರಿ ಯಾವ ನೆಪವಡ್ಡದೆ ತಟ್ಟೆಯಲ್ಲಿನ ಅರ್ಧ ಮುಗಿಸಿದ್ದೆ, ಆವಾಗಲೆ ನೆನಪಾಗಿದ್ದು ಈ ಭತಗೆ ಹೊಸ ನಾಮಕರಣ ಮಾಡೊಣವೆಂದು ಮನದಲ್ಲಿ ನೆನೆದು ಉಹಿಸಿದೆ. ನಂತರ ನೆನಪಾಯಿತು ಇದಕ್ಕೆ ಚವಳಿಕಾಯಿ + ಭಾತ =ಚೌಚೌ ಭಾತ ಎಂದೆ ಅಣ್ಣ ನಗ್ಗುತ್ತಾ ಉಟಮುಗಿಸಿದ. ಮಾರನೆಯ ದಿನ ನಾನು ಕಚೇರಿಗೆ ಬರುತ್ತಿದ್ದಾಗ, ನನ್ನ ಹಳೆಯ ಸ್ನೇಹಿತ ಭೇಟಿಯಾದ ಕುಶಲೊಪಹಾರ ವಿಚಾರಿಸಿ, ಪಕ್ಕದ ಹೊಟೆಲಗೆ ತಿಂಡಿತಿನ್ನಲ್ಲು ಹೊದೆವು. ನಮ್ಮದು ಉತ್ತರ ಕನರ್ಾಟಕ ವಾದ್ದೆರಿಂದ ಎಲ್ಲೆ ಹೊದರು ಮೊದಲಿಗೆ ಉಪ್ಪಿಟು, ಶಿರಾ ತೆಗೆದು ಕೊಂಡೆವು. ಈ ಖಾಧ್ಯಗಳನ್ನು ತಾನೆ ಮಾಡಿದವನ ಹಾಗೆ ಗೇಳಿಯ ಲೇ ಚೌಚೌ ಭಾತ ಹ್ಯಾಗಿತ್ತು ಎಂದು ಕೇಳಿದ. ನನಗೆ ಮಾತ್ರ ನಗು ತಾಳಲಾರದೆ ಬಿದ್ದು ಬಿದ್ದು ನಕ್ಕೆ, ಕಾರಣ ಕೇಳಿದ ಎನು ಉತ್ತರಿದೆ ಚಹಾ ಕುಡಿದು ಶಿವಾಜಿನಗರ ಬಸ್ಸ ಹತ್ತಿ ಕೆಲಸದತ್ತ ಮುಖ ಮಾಡಿದ್ದೆ.